Untitled Document
Sign Up | Login    
Dynamic website and Portals
  

Related News

ಉಗ್ರ ಬರ್ಹಾನ್ ವಾನಿ ಹತ್ಯೆ: ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ

ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಬುರ್ಹಾನ್‌ ವಾನಿಯನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ವಾನಿ ಪರವಾಗಿ ಬೀದಿಗಿಳಿ ದಿರುವ ಅಪಾರ ಸಂಖ್ಯೆಯ ಜನರು ಕಾಶ್ಮೀರದಾದ್ಯಂತ ಹಿಂಸಾ ಚಾರ ನಡೆಸಿದ್ದಾರೆ. ಮೂರು ಪೊಲೀಸ್‌ ಕಟ್ಟಡ ಸೇರಿ ಹಲವಾರು ಬಿಲ್ಡಿಂಗ್‌ಗಳಿಗೆ...

ಬಿಎಸ್​ಎಫ್ ಯೋಧರಿಂದ ಲಷ್ಕರ್ ಸಂಘಟನೆಯ ಕಮಾಂಡರ್ ಬಂಧನ

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ ಯೋಧರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್ ​ನನ್ನು ಬಂಧಿಸಿದ್ದಾರೆ. ಇಲ್ಲಿನ ಸೋಗಮ್ ಪ್ರಾಂತ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಬು ಉಕಾಶ್ ಉರ್ಫ್ ಹಂಜುಲ್ಲಾ ಎಂಬಾತನನ್ನು ಬಿಎಸ್​ಎಫ್ ಪಡೆ ಬಂಧಿಸಿ, ವಿಚಾರಣೆಗೊಳಪಡಿಸಿವೆ. ಪಾಕಿಸ್ತಾನ ಮೂಲದ...

ಅಮೆರಿಕಾ ದಾಳಿಗೆ ಐಸಿಸ್ ಉಗ್ರ ಸಂಘಟನೆಯ ಮುಖಂಡ ಅಬುಬಕರ್ ಅಲ್ ಬಗ್ದಾದಿ ಸಾವು

ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಯ ಮುಖಂಡ ಅಬುಬಕರ್ ಅಲ್ ಬಗ್ದಾದಿ ಹತ್ಯೆಯಾಗಿರುವುದಾಗಿ ತಿಳಿದುಬಂದಿದೆ. ಐಸಿಸ್ ಪ್ರಾಬಲ್ಯ ಹೊಂದಿರುವ ಉತ್ತರ ಸಿರಿಯಾದ ರಖ್ಖಾ ಪ್ರದೇಶದಲ್ಲಿ ಅಮೆರಿಕದ ವೈಮಾನಿಕ ಪಡೆ ನಡೆಸಿದ ದಾಳಿಯಲ್ಲಿ...

ಉಗ್ರ ಜೈನುಲ್ ಅಬೇದಿನ್ ನನ್ನು ಬಂಧಿಸಿದ ಪೊಲೀಸರು

ಕರ್ನಾಟಕ, ಗುಜರಾತ್ ಪೊಲೀಸರು ಹಾಗೂ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಘಟಕ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಮೋಸ್ಟ್ ವಾಂಟೆಡ್ ಉಗ್ರ ಜೈನುಲ್ ಅಬೇದಿನ್ ​ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮುಂಬೈ ವಿಮಾನ...

ಚೀನಾಗೆ ಭಾರತ ತಿರುಗೇಟು: ದೋಲ್ಕುನ್‌ ಇಸಾಗೆ ಭಾರತ ಪ್ರವೇಶಕ್ಕೆ ಅನುಮತಿ

ಪಠಾಣ್‌ ಕೋಟ್‌ ಮೇಲಿನ ದಾಳಿ ಪ್ರಕರಣದ ರೂವಾರಿ, ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಯತ್ನಕ್ಕೆ ಅಡ್ಡಿಪಡಿಸಿದ ಚೀನಾಕ್ಕೆ ಭಾರತ ತಿರುಗೇಟು ನೀಡಿದೆ. ಚೀನಾ ಭಯೋತ್ಪಾದಕ ಎಂದು...

ಭಾರತದ ಮೇಲೆ ಗೆರಿಲ್ಲಾ ದಾಳಿ ನಡೆಸಿ ಷರಿಯಾ ಕಾನೂನು ಜಾರಿಗೊಳಿಸಲು ಐಸಿಸ್ ತಂತ್ರ

ಭಾರತದಲ್ಲಿರುವ ಹಿಂದೂಗಳನ್ನು ನಾಶ ಮಾಡುವ ಮೂಲಕ ಹಿಂದೂಸ್ತಾನದಲ್ಲಿ ಷರಿಯಾ ಕಾನೂನು ಜಾರಿಗೊಳಿಸುವ ವಿಶ್ವದ ಅತ್ಯಂತ ಪ್ರಭಾವಿ ಉಗ್ರಗಾಮಿ ಸಂಘಟನೆ ಐಸಿಸ್ ಮುಂದಾಗಿದೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ನೆರವಿನೊಂದಿಗೆ ಭಾರತದ ಮೇಲೆ ಗೆರಿಲ್ಲಾ ದಾಳಿ ನಡೆಸಿ ಹಿಂದುಗಳ...

ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಹತ್ಯೆಗೆ ಲಷ್ಕರ್ ಸಂಚು ರೂಪಿಸಿತ್ತುಃ ಡೇವಿಡ್ ಹೆಡ್ಲಿ

ಪಾಕ್‌ ಮೂಲದ ಉಗ್ರ ಸಂಘಟನೆ ಲಷ್ಕರ ಎ ತೊಯ್ಯಬಾ ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆ ಅವರನ್ನು ಹತ್ಯೆಗೈಯುವ ಪ್ರಯತ್ನ ಮಾಡಿತ್ತು, ಆದರೆ ಆ ದುಷ್ಕರ್ಮಿಯನ್ನು ಬಂಧಿಸಲಾಯಿತು ಎಂದು ಉಗ್ರ ಡೇವಿಡ್ ಹೆಡ್ಲಿ ಗುರುವಾರ ತಿಳಿಸಿದ್ದಾನೆ. ಠಾಕ್ರೆ ಹತ್ಯೆ ಯತ್ನದ ಬಗ್ಗೆ ನನಗೆ ನೇರ...

ಅಲ್‌ ಖೈದಾ ನಂಟು; ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ

ಅಲ್‌ ಖೈದಾ ಉಗ್ರ ಸಂಘಟನೆಯ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಶಂಕಿತ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೌಲಾನಾ ಅನ್ಸರ್‌ ಶಾ ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಮದ್ರಸಾವೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಅನ್ಸರ್‌ ಶಾನನ್ನು ಬುಧವಾರ...

ನಾಗ್ಪುರದಲ್ಲಿ ಐಸಿಸ್ ಸೇರಲಿದ್ದ 3 ಯುವಕರ ಸೆರೆ

ಐಸಿಸ್‌ ಉಗ್ರ ಸಂಘಟನೆಯನ್ನು ಸೇರಿಕೊಳ್ಳಲು ಯತ್ನಿಸುತ್ತಿದ್ದಾರೆಂಬ ಸಂದೇಹದಿಂದ ಶನಿವಾರ ಉಗ್ರ ನಿಗ್ರಹ ದಳ (ಎಟಿಎಸ್‌) ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿದೆ. ಎಟಿಎಸ್ ಮೂಲಗಳ ಪ್ರಕಾರ, ಬಂಧಿತರು ತೆಲಂಗಾಣ ಮೂಲದವರಾಗಿದ್ದು ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿದ್ದರು. ಬಂಧಿಸಲ್ಪಟ್ಟಿರುವ ಮೂವರು ವ್ಯಕ್ತಿಗಳು ಒಂದು ದಿನದ ಹಿಂದಷ್ಟೇ ರಸ್ತೆ...

ಅಮರನಾಥ ಯಾತ್ರಿಗಳ ಮೇಲೆ ದಾಳಿಗೆ ಉಗ್ರರ ಸಂಚು

ಬುಧವಾರದಿಂದ ಪ್ರಾರಂಭವಾದ ಹಿಂದುಗಳ ಪವಿತ್ರ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ. ಈಗಾಗಲೇ ಗಡಿಭಾಗದಿಂದ 10-15 ಉಗ್ರರು ಕಾಶ್ಮೀರವನ್ನು ಪ್ರವೇಶಿಸಿದ್ದು, ಯಾವುದೇ ಸಮಯದಲ್ಲಿ ದಾಳಿ ನಡೆಸುವ ಸಾಧ್ಯತೆ...

ಕಾಶ್ಮೀರದಲ್ಲಿ ಪಾಕ್ ಧ್ವಜ ಹಾರಾಟ: ಪ್ರಧಾನಿ ಮೋದಿ ವಿರುದ್ಧ ನಿತೀಶ್ ವಾಗ್ದಾಳಿ

ಜಮ್ಮು-ಕಾಶ್ಮೀರದಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆ ಹಾಗೂ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವ ಘಟನೆಗಳ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣಾ ಪೂರ್ವದಲ್ಲಿ ಮೋದಿ ನೀಡಿದ್ದ '56 ಇಂಚಿನ ಎದೆ'...

ಐಸಿಸ್ ಸೇರಿದ್ದ ಕರ್ನಾಟಕದ ಮೂವರು ಯುವಕರು ಸಾವು

ಕರ್ನಾಟಕದಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಮೂವರು ಯುವಕರು, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರು ಬೆಂಗಳೂರಿನವರಾಗಿದ್ದಾರೆ ದೆಹಲಿಯಿಂದ ಇತ್ತೀಚಿಗಷ್ಟೆ ಬಂದಿರುವ ಗುಪ್ತಚರ ಸಂಸ್ಥೆಯ ವರದಿಯಲ್ಲಿ ಈ ಯುವಕರು ಎರಡು ವರ್ಷದ ಮುಂಚೆಯೇ ಇಸ್ಲಾಮಿಕ್ ಸ್ಟೇಟ್ ಸೇರಿದ್ದು,...

ಶಾಲೆ ಮೇಲೆ ಪಾಕ್‌ ಹೆಲಿಕಾಪ್ಟರ್‌ ಪತನ: 7 ಜನರ ಸಾವು

ರಾಯಭಾರಿಗಳನ್ನು ಹೊತ್ತೂಯ್ಯುತ್ತಿದ್ದ ಪಾಕಿಸ್ತಾನ ಸೇನೆಗೆ ಸೇರಿದ ಹೆಲಿಕಾಪ್ಟರೊಂದು ಪಾಕ್‌ ನ ಉತ್ತರ ದಿಕ್ಕಿನಲ್ಲಿರುವ ಗಿಲಿಟ್‌ ನ ಶಾಲೆಯೊಂದರ ಮೇಲೆ ಪತನವಾಗಿದೆ. ಈ ದುರ್ಘ‌ಟನೆಯಲ್ಲಿ ನಾರ್ವೆ ಹಾಗೂ ಫಿಲಿಪ್ಪೀನ್ಸ್‌ ನ ರಾಯಭಾರಿಗಳು, ಮಲೇಷ್ಯಾ ಮತ್ತು ಇಂಡೋನೇಷ್ಯಾ ರಾಯಭಾರಿಗಳ ಪತ್ನಿಯಂದಿರು, ಹೆಲಿಕಾಪ್ಟರ್‌ ನ ಇಬ್ಬರು...

ಭಾರತದಲ್ಲಿ ಐಸಿಸ್‌ ನ ಮೊದಲ ಸ್ಲೀಪರ್ ಸೆಲ್‌ ಪತ್ತೆ

ಐಸಿಸ್‌ ಉಗ್ರ ಸಂಘಟನೆ ಭಾರತದಲ್ಲೂ ಸದ್ದಿಲ್ಲದೆ ಬೇರೂರಲಾರಂಭಿಸಿರುವುದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದ ಐವರು ಶಂಕಿತ ಉಗ್ರರು, ಐಸಿಸ್‌ ಜತೆಗೆ ನಂಟು ಹೊಂದಿರುವ ಜಿಹಾದ್‌ ಸಂಘಟನೆಯೊಂದರ ಕಾರ್ಯಕರ್ತರು ಎನ್ನುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕುತೂಹಲಕರ ಸಂಗತಿಯೆಂದರೆ...

ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಲು ತೆರಳುತ್ತಿದ್ದ 14 ಯುವಕರ ಬಂಧನ

ಪ್ರಮುಖ ಬೆಳವಣಿಗೆಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐ.ಎಸ್.ಐ.ಎಸ್)ಯನ್ನು ಸೇರಲು ತೆರಳುತ್ತಿದ್ದ 14 ಮಂದಿ ಯುವಕರನ್ನ ಹೈದ್ರಾಬಾದ್ ಪೊಲೀಸರು ತಡೆದಿದ್ದಾರೆ. ಆಂಧ್ರಪ್ರದೇಶ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ 14 ಮಂದಿ ಯುವಕರನ್ನು ಹೈದ್ರಾಬಾದ್ ನ ವಿಮಾನ ನಿಲ್ದಾಣದಲ್ಲಿ...

ಮುಂಬೈ ಮೇಲೆ ಮತ್ತೊಂದು ದಾಳಿಗೆ ಉಗ್ರರ ಸಂಚು

26/11ರ ಮುಂಬೈ ದಾಳಿ ಮಾದರಿಯಲ್ಲಿಯೇ ಭಯೋತ್ಪಾದರು ಮುಂಬೈ ಮೇಲೆ ಮತ್ತೊಮ್ಮೆ ಬಾರೀ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ರವಾನಿಸಿದೆ. 2008 ರ ಮುಂಬೈ ಉಗ್ರ ದಾಳಿಯ ರೂವಾರಿ ,ಲಷ್ಕರ್‌-ಎ-ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್‌‌ ಝಕಿ ಉರ್‌...

ರಾಷ್ಟ್ರ ರಾಜಧಾನಿ ಮೇಲೆ ಆತ್ಮಾಹುತಿ ದಾಳಿಯ ಎಚ್ಚರಿಕೆ

ರಾಷ್ಟ್ರ ರಾಜಧಾನಿ ನವದೆಹಲಿ ಮೇಲೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಭಾರೀ ಪ್ರಮಾಣದ ಆತ್ಮಾಹುತಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿವೆ. ಪಾಕ್‌ ಮೂಲದ ಜೈಷ್‌ ಎ ಮಹಮ್ಮದ್‌ ಉಗ್ರ ಸಂಘಟನೆಯ ನೇತೃತ್ವದಲ್ಲಿ ದೆಹಲಿಯ ಮೇಲೆ...

ಆರ್.ಎಸ್.ಎಸ್ ಉಗ್ರ ಸಂಘಟನೆ ಎಂದು ಘೋಷಿಸಲು ಕೋರಿದ್ದ ಅರ್ಜಿಗೆ ಅಮೆರಿಕಾ ವಿರೋಧ

ರಾಷ್ಟ್ರೀಯ ಸ್ವಯಂ ಸೇವಕ ಸಂಘಟ(ಆರ್.ಎಸ್.ಎಸ್)ನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಲು ಕೋರಿ, ಅಮೆರಿಕಾದ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಅಲ್ಲಿನ ಕೋರ್ಟ್ ಗೆ ಸಲ್ಲಿಸಿದ್ದ ಮನವಿಗೆ ಅಮೆರಿಕಾ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಆರ್.ಎಸ್.ಎಸ್ ನ್ನು ಉಗ್ರ ಸಂಘಟನೆಯೆಂದು ಘೋಷಿಸಬೇಕೆಂದು ಅಮೆರಿಕಾದ ಸಿಖ್ಸ್...

ಜಿಹಾದಿಯಲ್ಲಿ ಸಂತೋಷವಿದೆ. ಮತ್ತೆ ಭಾರತಕ್ಕೆ ಬರಲ್ಲ: ಭಾರತೀಯ ಯುವಕ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಸಿಸ್) ಉಗ್ರ ಸಂಘಟನೆ ಸೇರಿದ್ದ ಭಾರತೀಯ ಮೂಲದ ಯುವಕನೊಬ್ಬ ಜಿಹಾದಿ ಕೆಲಸದಲ್ಲಿ ನಾನು ಖುಷಿಯಾಗಿದ್ದೇನೆ. ಮತ್ತೇಂದು ಭಾರತಕ್ಕೆ ಬರುವುದಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾನೆ. ಕಳೆದ ವರ್ಷ ಕಲ್ಯಾಣದಿಂದ ತೆರಳಿದ್ದ ನಾಲ್ವರು ಯುವಕರ ಪೈಕಿ ಅರೀಬ್ ಮಜೀದ್...

ಭಾರತದ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಭಾವ ನಗಣ್ಯ: ರಾಜನಾಥ್ ಸಿಂಗ್

'ಪಾಕಿಸ್ತಾನ', ಭಾರತದ ಮೇಲೆ ನಡೆಸುತ್ತಿರುವ ಪ್ರಾಕ್ಸಿ ಯುದ್ಧವನ್ನು ನಿಲ್ಲಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ. ಜೈಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನ ತಕ್ಷಣವೇ ಭಾರತದ ವಿರುದ್ಧ ನಡೆಸುತ್ತಿರುವ ಪ್ರಾಕ್ಸಿ...

ಇಸ್ಲಾಮಿಕ್ ಸ್ಟೇಟ್ ಸೇರಿರುವ 5000 ಯುರೋಪಿಯನ್ನರು!

'ಭಯೋತ್ಪಾದನೆ' ಯುರೋಪ್ ಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು ಸುಮಾರು 5000 ಯುರೋಪಿಯನ್ನರು ಇಸ್ಲಾಮಿಕ್ ಸ್ಟೇಟ್ ತಂಡ ಸೇರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಯುರೋಪ್ ನಿಂದ ಇಸ್ಲಾಮಿಕ್ ಸ್ಟೇಟ್ ಗೆ ಸೇರಿರುವ ಬಗ್ಗೆ ಮಾಹಿತಿ ನೀಡಿರುವ ಯುರೋಪ್ ನ ಪೊಲೀಸ್ ಸಂಸ್ಥೆ ಯುರೋಪೋಲ್,...

ನಮ್ಮ ಗುರಿ ಷರೀಫ್: ಉಗ್ರ ಮುಲ್ಲಾ ಫಜಲುಲ್ಲಾ

ಉಗ್ರರನ್ನು ಗಲ್ಲಿಗೇರಿಸುತ್ತಿರುವ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ತಾಲಿಬಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಷರೀಫ್ ನೇತೃತ್ವದ ಪಿಎಂಎಲ್-ಎನ್ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವಂತೆ ತೆಹ್ರೀಕ್ ಎ ತಾಲಿಬಾನ್ ಉಗ್ರ ಸಂಘಟನೆ ಮುಖಂಡ ಮುಲ್ಲಾ ಫಜಲುಲ್ಲಾ ಆದೇಶಿಸಿದ್ದಾನೆ. ಈ ಸಂಬಂಧ ಆತ ಆಫ್ಘನ್‌ನ...

ಮುಂಬೈನಲ್ಲಿ ಸಿಮಿ ಉಗ್ರರ ದಾಳಿ ಸಂಭವ

ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ಬಳಿಕ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಮುಂಬೈ, ಪುಣೆ, ದೆಹಲಿ, ಕೋಲ್ಕತಾ, ಚೆನ್ನೈ, ಹೈದರಾಬಾದ್‌ ಸೇರಿದಂತೆ ದೇಶದಾದ್ಯಂತ ಹೈ ಆಲರ್ಟ್‌ ಘೋಷಿಸಲಾಗಿದೆ. ಬೆಂಗಳೂರು ದಾಳಿಯ ನಂತರ ಮುಂಬೈ ಅನ್ನು ಉಗ್ರರು ಗುರಿಯಾಗಿರಿಸಿಕೊಂಡಿದ್ದಾರೆ. ಸಿಮಿ ಉಗ್ರ ಸಂಘಟನೆ ಮುಂಬೈ...

ಬೆಂಗಳೂರು ಸ್ಫೋಟದ ಹಿಂದೆ ಅಲ್-ಉಮಾ ಸಂಘಟನೆ ಕೈವಾಡದ ಶಂಕೆ

ಬೆಂಗಳೂರು ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ನಿಷೇಧಿತ ಉಗ್ರ ಸಂಘಟನೆ ಅಲ್-ಉಮಾ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಜಿಲ್ಲೆಗೆ ಭೇಟಿ ನೀಡಿದ್ದು ತನಿಖೆ ಮುಂದುವರೆಸಿದ್ದಾರೆ....

ಉಗ್ರರ ದಾಳಿ ಸಾಧ್ಯತೆ: ಗೃಹ ಇಲಾಖೆಯಿಂದ ಎಲ್ಲಾ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಣೆ

'ಸಿಡ್ನಿ', ಪಾಕಿಸ್ತಾನದಲ್ಲಿ ಉಗ್ರರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ನೀಡಿದೆ. ಎಲ್ಲಾ ರಾಜ್ಯಗಳ ಡಿಜಿಪಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಸಿಡ್ನಿ ಹಾಗೂ ಪೇಶಾವರದಲ್ಲಿ ನಡೆದಿರುವ ಉಗ್ರರ ದಾಳಿಯನ್ನು...

ಟ್ವಿಟರ್ ಉಗ್ರ ಮೆಹ್ದಿಗೆ ಇದ್ದ ಹಿಂಬಾಲಕರಲ್ಲಿ ಶೇ.60ರಷ್ಟು ಮುಸ್ಲಿಮೇತರರು!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿಯ ಶೇ.60ರಷ್ಟು ಅನುಯಾಯಿಗಳು ಮುಸ್ಲಿಮೇತರರು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮೆಹ್ದಿಯ ಟ್ವಿಟರ್ ಖಾತೆಯನ್ನು ಅನುಸರಿಸುತ್ತಿದ್ದ ಮುಸ್ಲಿಮರಲ್ಲಿ ಪಶ್ಚಿಮ ದೇಶದ ನಾಗರಿಕರು ಪ್ರಮುಖವಾಗಿ ಯು.ಕೆ ಯವರು...

ಇಸಿಸ್ ಟ್ವಿಟರ್ ಖಾತೆ ಹೊಂದಿದ್ದ ಉಗ್ರನ ಬಂಧನ

ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ದೇಶದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಟ್ವಿಟರ್ ಖಾತೆದಾರನನ್ನು ಬಂಧಿಸಲಾಗಿದೆ. ಉಗ್ರನ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಂಧಿಸಿದ್ದಾರೆ. ಇಸಿಸ್ ಹೆಸರಲ್ಲಿ ಪ್ರಕಟವಾಗುತ್ತಿದ್ದ...

ಬೆಂಗಳೂರು ವ್ಯಕ್ತಿಯಿಂದ ಇಸೀಸ್ ಉಗ್ರ ಸಂಘಟನೆ ಟ್ವಿಟರ್ ಖಾತೆ ನಿರ್ವಹಣೆ!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ, ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇಸೀಸ್ ಉಗ್ರರ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿ ಬೆಂಗಳೂರಿನವನೆಂದು ತಿಳಿದುಬಂದಿದ್ದು ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿಗಳು ಬೆಂಗಳೂರಿಗೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ. ತನಿಖಾ ದಳ ಸಿಬ್ಬಂದಿಗಳಿಗೆ...

ಸಿಮಿ ಉಗ್ರರಿಂದ ದಾಳಿ ಸಾಧ್ಯತೆ: ದೇಶಾದ್ಯಂತ ಹೈಅಲರ್ಟ್ ಘೋಷಣೆ

ನಿಷೇಧಿತ 'ಸಿಮಿ ಉಗ್ರ ಸಂಘಟನೆ'ಯ 5 ಉಗ್ರರು ಮಧ್ಯಪ್ರದೇಶದ ಜೈಲಿನಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಜೈಲಿನಿಂದ ತಪ್ಪಿಸಿಕೊಂಡಿರುವ ಉಗ್ರರಿಗೆ ಭಾರತದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನದ ಐ.ಎಸ್.ಐ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಅನ್ವಯ...

ಐ.ಎಸ್.ಐ.ಎಸ್ ಸೇರಿದ್ದ ಯುವಕ ಭಾರತಕ್ಕೆ ವಾಪಸ್:ಎನ್.ಐ.ಎಯಿಂದ ವಿಚಾರಣೆ ಆರಂಭ

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಸಾವಿಗೀಡಾಗಿದ್ದಾನೆ ಎಂದು ನಂಬಲಾಗಿದ್ದ ಮುಂಬೈ ನ ಯುವಕ ಆರಿಫ್ ಮಜೀದ್ ಭಾರತಕ್ಕೆ ವಾಪಸ್ಸಾಗಿದ್ದಾನೆ. ನ.28ರಂದು ಆತ ಮನೆಗೆ ಬಂದಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕಲ್ಯಾಣ್ ನಗರದಿಂದ ಆರಿಫ್ ಮಜೀದ್,...

ಬರ್ದ್ವಾನ್ ಸ್ಫೋಟ ಪ್ರಕರಣ: ಮ್ಯಾನ್‌ಮಾರ್ ಪ್ರಜೆ ಬಂಧನ

ಪಶ್ಚಿಮ ಬಂಗಾಳದ ಬರ್ದ್ವಾನ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಹೈದ್ರಾಬಾದ್‌ನಲ್ಲಿ ಮ್ಯಾನ್‌ಮಾರ್ ಪ್ರಜೆಯೊಬ್ಬನನ್ನು ಬಂಧಿಸಿದೆ. ಬಂಧಿತ ವ್ಯಕ್ತಿಯನ್ನು 21ರ ಹರೆಯದ ಖಾಲಿದ್ ಮಹಮ್ಮದ್ ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ರಾಜಧಾನಿಯಲ್ಲಿ ನಕಲಿ ದಾಖಲೆ ಹೊಂದಿ ವಾಸವಾಗಿದ್ದ ಎನ್ನಲಾಗಿದೆ. ಖಾಲಿದ್, ತೆಹರೀಕ್-ಇ-ತಾಲೀಬಾನ್...

ವಾಘಾ ಗಡಿಯಲ್ಲಿ ಸ್ಫೋಟ: ಪಾಕ್-ಭಾರತ ನಡುವಿನ ಭೂಮಾರ್ಗ ವ್ಯಾಪಾರ ಚಟುವಟಿಕೆ ಸ್ಥಗಿತ

'ವಾಘಾ ಗಡಿ'ಯಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ನಡುವಿನ ವ್ಯಾಪಾರ ವಹಿವಾಟುಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪ್ರತಿನಿತ್ಯ ಪಾಕಿಸ್ತಾನ-ಭಾರತ ಗಡಿ ಪ್ರದೇಶದಲ್ಲಿ ಟ್ರಕ್ ಗಳ ಮೂಲಕ ತರಕಾರಿ, ಹಣ್ಣು ಸೇರಿದಂತೆ ವಿವಿಧ ಉತ್ಪನ್ನಗಳ ವ್ಯಾಪಾರ ನಡೆಯುತ್ತಿತ್ತು. ಆದರೆ ವಾಘಾ ಗಡಿಯಲ್ಲಿ...

ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಲು ಯತ್ನಿಸಿದ್ದ ಗೂಗಲ್ ನ ಮಾಜಿ ಉದ್ಯೋಗಿ?

ಪ್ರತಿಷ್ಠಿತ ಗೂಗಲ್ ಕಂಪನಿಯ ಮಾಜಿ ಉದ್ಯೋಗಿಯೋರ್ವ ಇಸ್ಲಾಮಿಕ್ ಸ್ಟೇಟ್ ನ ಉಗ್ರ ಸಂಘಟನೆ ಸೇರಲು ಯತ್ನಿಸುತ್ತಿದ್ದ ಎಂದು ಹೈದರಾಬಾದ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ನ ಗೂಗಲ್ ಯುನಿಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಇತ್ತೀಚೆಗಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿ ಸೌದಿ...

ಜಮ್ಮು-ಕಾಶ್ಮೀರದಲ್ಲಿ ಕಿಡಿಗೇಡಿಗಳಿಂದ ಮತ್ತೊಮ್ಮೆ ಐ.ಎಸ್.ಐ.ಎಸ್ ಧ್ವಜ ಪ್ರದರ್ಶನ

'ಜಮ್ಮು-ಕಾಶ್ಮೀರ'ದಲ್ಲಿ ಮತ್ತೊಮ್ಮೆ ಐ.ಎಸ್.ಐ.ಎಸ್ ಉಗ್ರ ಸಂಘಟನೆಯ ಧ್ವಜವನ್ನು ಪ್ರದರ್ಶಿಸಲಾಗಿದೆ. ಅ.17ರಂದು ರಾಜ್ಯದ ರಾಜಧಾನಿ ಶ್ರೀನಗರದಲ್ಲಿರುವ ಜಮ್ಮಾ ಮಸೀದಿಯಲ್ಲಿ ಕೆಲ ಯುವಕರು ರಾಜಾರೋಷವಾಗಿ ಐ.ಎಸ್.ಐ.ಎಸ್ ಧ್ವಜವನ್ನು ಪ್ರದರ್ಶಿಸಿದ್ದಾರೆ. ಶುಕ್ರವಾರದ ಸಂಜೆ ಪ್ರಾರ್ಥನೆ ಬಳಿಕ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಲ್ಲಿ ಐ.ಎಸ್.ಐ.ಎಸ್...

ಭಾರತದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಉಗ್ರ ಸಂಘಟನೆಗಳ ಸಂಚು

ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಐ.ಎಸ್.ಐ.ಎಸ್ ಹಾಗೂ ಅಲ್-ಖೈದಾ ಉಗ್ರ ಸಂಘಟನೆ ಸಂಚು ರೂಪಿಸಿವೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ದೇಶದ ಪ್ರವಾಸಿ ತಾಣಗಳು, ಮೆಟ್ರೋ ಸಿಟಿಗಳನ್ನು ಗುರಿಯಾಗಿಸಿಕೊಂಡಿರುವ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಅ.16ರಂದು ದೆಹಲಿಯಲ್ಲಿ...

ಐ.ಎಸ್.ಐ.ಎಸ್ ಶಂಕಿತ ಉಗ್ರರನ್ನು ಬಂಧಿಸಿದ ಆಸ್ಟ್ರೇಲಿಯಾ

'ಐ.ಎಸ್.ಐ.ಎಸ್' ಉಗ್ರ ಸಂಘಟನೆಯೊಂದಿಗೆ ಸಮರಕ್ಕಿಳಿದಿರುವ ಆಸ್ಟ್ರೇಲಿಯಾ ಸಾರ್ವಜನಿಕವಾಗಿ ಜನರ ತಲೆ ಕತ್ತರಿಸುವ ಯೋಜನೆ ರೂಪಿಸಿದ್ದ 15 ಶಂಕಿತ ಐ.ಎಸ್.ಐ.ಎಸ್ ಬೆಂಗಲಿಗರನ್ನು ಬಂಧಿಸಿದೆ. ಆಸ್ಟ್ರೇಲಿಯಾ ಉಗ್ರ ನಿಗ್ರಹ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಬಗ್ಗೆ ವಿವರ ನೀಡಿರುವ ಪ್ರಧಾನಿ ಟೋನಿ...

ಭಾರತಕ್ಕೂ ಕಾಲಿಟ್ಟ ಶಿಯಾ-ಸುನ್ನಿ ಸಮರ: ಅಲ್ ಬಾಗ್ದಾದಿ ತಲೆಗೆ 5 ಕೋಟಿ ರೂ. ಘೋಷಣೆ

'ಇರಾಕ್' ನಲ್ಲಿ ಉಂಟಾಗಿರುವ ಶಿಯಾ ಸುನ್ನಿ ಗಳ ನಡುವಿನ ಸಮರ ಉತ್ತರ ಪ್ರದೇಶಕ್ಕೂ ಕಾಲಿಟ್ಟಿದ್ದು ಸುನ್ನಿ ಸಂಘಟನೆ ಮುಖಂಡ ಅಲ್ ಬಾಗ್ದಾದಿ ತಲೆಗೆ ಶಿಯಾ ಸಂಘಟನೆ 5 ಕೋಟಿ ರೂ ಬಹುಮಾನ ಘೋಷಿಸಿದೆ. ಈ ಮೂಲಕ ಭಾರತದಲ್ಲೂ ಶಿಯಾ-ಸುನ್ನಿಗಳ ನಡುವೆ ಘರ್ಷಣೆ...

ಪ್ರಧಾನಿ ಮೋದಿ ಅವರನ್ನು ಮುಸ್ಲಿಂ ವಿರೋಧಿಯಾಗಿ ಬಿಂಬಿಸಲು ಅಲ್ ಖೈದಾ ಯತ್ನ- ಅಮೆರಿಕ

'ಭಾರತ'ದಲ್ಲಿ ಶಾಖೆ ಆರಂಭಿಸುವುದಾಗಿ ಘೋಷಿಸಿರುವ ಅಲ್ ಖೈದಾ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿದೆ ಎಂದು ಅಮೆರಿಕ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಲ್ ಖೈದಾ ಸಂಘಟನೆ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕಾ...

ಭಾರತದಲ್ಲಿ ಅಲ್ ಖೈದಾ ಶಾಖೆ ತೆರೆಯುವ ಬಗ್ಗೆ ಉಗ್ರರ ಬೆದರಿಕೆ

ಅಲ್ ಖೈದಾ ಉಗ್ರ ಸಂಘಟನೆ ಭಾರತದ ಮೇಲೆ ಮತ್ತೊಮ್ಮೆ ಕಣ್ಣಿಟ್ಟಿದೆ. ಭಾರತದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಶಾಖೆ ತೆರೆಯಲು ಅಲ್ ಖೈದಾ ಮುಖ್ಯಸ್ಥ ಐಮನ್ ಅಲ್ ಜವಾಹರಿ ಕರೆ ನೀಡಿದ್ದಾನೆ. ಭಾರತದ ಮೇಲೆ ದಾಳಿ ನಡೆಸಿ, ಅಲ್ಲಿ ಗುಂಪುಕಟ್ಟಿ ಅಲ್ ಖೈದಾ...

ಬೋಡೋ ಉಗ್ರರ ಅಟ್ಟಹಾಸ: ಅಸ್ಸಾಂ ಯುವತಿಯ ಹತ್ಯೆ

ಅಸ್ಸಾಂ ನಲ್ಲಿ ಬೋಡೋ ಉಗ್ರ ಸಂಘಟನೆ ಅಟ್ಟಹಾಸ ಮಿತಿಮೀರಿದ್ದು ಚಿರಂಗ್ ಜಿಲ್ಲೆಯಲ್ಲಿ ಅಸ್ಸಾಂ ಯುವತಿಯೋರ್ವಳನ್ನು ಹತ್ಯೆ ಮಾಡಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಹತ್ಯೆಗೀಡಾಗಿರುವ ಯುವತಿ ಬೋಡೋ ಸಂಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಉಗ್ರರು ಹೇಳಿದ್ದಾರೆ. ಐವರು...

ಅಮೆರಿಕದವರನ್ನು ರಕ್ತದ ಮಡುವಿನಲ್ಲಿ ಮುಳುಗಿಸುತ್ತೇವೆ-ಐ.ಎಸ್.ಐ.ಎಸ್ ಸಂದೇಶ

'ಇರಾಕ್' ಉಗ್ರ ಸಂಘಟನೆ ಐ.ಎಸ್.ಐ.ಎಸ್ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದವರ ಮೇಲೆ ಯಾವುದೇ ಪ್ರದೇಶದಲ್ಲಿ ದಾಳಿ ನಡೆಸುವುದಾಗಿ ಐ.ಎಸ್.ಐ.ಎಸ್ ಎಚ್ಚರಿಕೆ ನೀಡಿದೆ. ಐ.ಎಸ್.ಐ.ಎಸ್ ಮೇಲೆ ಮಿಲಿಟರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇತ್ತೀಚೆಗಷ್ಟೇ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited